ಯುದ್ಧ ಮತ್ತು ಅವನು..

ಕತ್ತಿ ಸಾಣೆಗಿಟ್ಟಿರುವೆ..,
ಕೋವಿಯನು ರಿಪೇರಿಗೂ..
ನಮ್ಮೆಡೆಯ ಯುದ್ಧಕ್ಕೊಂದು,
ಗೆಲುವಿನ ತೋರಣ ಕಟ್ಟಿ,
ಭರವಸೆಯ ಹೆಜ್ಜೆಯಿಟ್ಟಿರುವೆ..

ಉರುಳಿ ಬಿದ್ದಿರುವ ರುಂಡಗಳೂ,
ಶಾಂತಿಯನು ಕಾರುವಂತಿದೆ..
ಸಮರದ ಭೀಕರತೆಯ ಅರಿತು,
ಪಶ್ಚಾತ್ತಾಪ ಪಡುವಂತಿದೆ..
ಯುದ್ಧ ಮುಂದುವರಿಯುತಿದೆ...

ತಂದೆಯ ಜನಾಝದ ಮುಂದೆ ಕುಳಿತು,
ಮಗನ ಮುಗಿಲುಮುಟ್ಟಿದ ರೋಧನ,
ಹೃದಯವನ್ನೇ ಕುಕ್ಕಿದೆ..
ಬಾಪಾನ ಹೆಸರಿನ ಮುಂದೆ,
ಶಹೀದ್ ಎಂಬ ಪದವೂ ಸೇರಿದೆ..

ಹಚ್ಚಿದ ಸುಡುಮದ್ದುಗಳು,
ಸಿಡಿದು ಬೂದಿಯಾಗುವುದರೊಳಗೆ,
ಯುದ್ಧವೂ ಮುಗಿದಿದೆ..
ಹರಿದ ಸಮಬಣ್ಣದ ರಕ್ತದೋಕುಳಿಯೆಡೆ,
ಪಂಥ-ಪಂಗಡಗಳೂ ಮಡಿದಿವೆ..

ಯುದ್ಧಭೂಮಿ ಇನ್ನೂ ಇತಿಹಾಸವಾಗಿದೆ..
ಹುತಾತ್ಮರನ್ನು ವರ್ಷಕ್ಕೊಮ್ಮೆ ನೆನೆಸಿ,
ಶ್ರದ್ಧಾಂಜಲಿಯಿಡಲಾಗುತ್ತಿದೆ..
ಅವನು ಈಗಲೂ ಇಲ್ಲದ ತಂದೆಯ ಹುಡುಕಿ,
ಹತಾಶೆಯ ಅಡಿಗಳನಿಡುತಿದ್ದಾನೆ..

#ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!