ಕೊಳೆತ ಹಣ್ಣು..

ಕೊಳೆತ ಹಣ್ಣಿನ ರಾಶಿಯೊಂದನ್ನು
ಬಲಿತ ಹಕ್ಕಿಗಳು ಕುಕ್ಕುತ್ತಿದ್ದವು..
ಸೆಳೆತವಿತ್ತು ಅಲ್ಲಿ ನೊಣಗಳದ್ದು,
ಕುಳಿತಲ್ಲಿ ಕೂರದ ಹುಳಗಳದ್ದು..

ಕಸವು ತುಂಬಿತ್ತು ಅಲ್ಲಿ ಸುತ್ತಲೂ,
ಫಸಲು ಪಡೆದಿತ್ತು ದುರ್ಗಂಧವು..
ವಾಸನೆಯಿಂದ ಮೂಗು ಮುಚ್ಚಿತ್ತು..
ರಸವಾಗಿತ್ತದು ಕಾಗೆ-ಇರುವೆಗಳಿಗೆ..

ಮೂಗು ಮುಚ್ಚಿ ನಾನಾ ದಾರಿಯಲ್ಲಿ
ಹೋಗುತಿದ್ದಾಗ, ಅಲ್ಲಿದ್ದ ಹಣ್ಣೊಂದು
ಕೂಗಿ ಹೇಳಿತು ನನ್ನ ಬಲಕಿವಿಯಲ್ಲಿ,
ಬೀಗು ಮಾನವಾ ನೀನು ಹೋಗು..

ಬಣ್ಣಗಳು ತುಂಬಿ ನಾನು ಕಂಗೊಳಿಸಿ 
ಹಣ್ಣಾಗಿದ್ದಾಗ ತಿಂದು ತೇಗಿದೆ ನೀನು,
ಹುಣ್ಣೊಂದು ಮೈ ಸೇರಿದಾಗ ನನ್ನಲ್ಲಿ,
ಮಣ್ಣಿಗೆಸೆದು ಮೆಟ್ಟಿ ನಡೆಯುವೆಯಾ..?

ನೋಡು ಮಾನವರ ಹೃದಯವನು,
ಕೊಡು ನೀ ಅಲ್ಲಿಗೆ ನಿನ್ನ ಮೂಗನ್ನು,
ಪಡೆದುಕೋ ಆ ಕಲುಷಿತ ವಾಸನೆಯ,
ಓಡು ಮತ್ತೆ ನನ್ನ ದುರ್ಗಂಧ ಕಂಡು..

suwichaar.blogspot.in ★

#ಹಕೀಂ. ಪದಡ್ಕ
------------------------

(ಎಂ. ಎಸ್ ಜಲ್ಲಿ ಎಂಬವರ ಕೊಳೆತ ಹ(ಹು)ಣ್ಣು ಎಂಬ ಚುಟುಕು ಬರಹದ ಪ್ರೇರಣೆಯಿಂದ ಈ ಕಿರುಗವನ...)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!