ಉಳ್ಳ(ಇಲ್ಲದ)ವರು..

ಉಂಡು ದುಂಡಾದ ಹೊಟ್ಟೆಯು
ಕೊಬ್ಬು ತುಂಬಿ ಉಬ್ಬಿದೆ..
ಹಸಿವಿಲ್ಲದೆಯೂ ಉಸಿರು ಬಿಗಿದು
ಆ ದೈತ್ಯ ಜೀವ ಉನ್ನುತಿದೆ..
ಹಣದ ಗಂಟು ಹಿಡಿದು ಆ
ಜೀವ ಮುಂದೆ ಸಾಗುತಿದೆ..

ಇತ್ತ ಇಲ್ಲೊಬ್ಬ ಬಡಪಾಯಿಯೊಬ್ಬ
ಖಾಲಿಯಾದ ಚೀಲದೊಳಗೆ
ನಿರೀಕ್ಷೆಗಳನ್ನು ತುಂಬಿ ಹೊತ್ತಿದ್ದ..
ಬರಿದಾಗಿ ಬರಡಾದ ಹೊಟ್ಟೆಗೆ,
ಭರವಸೆ, ಕಾತುರವೇ ಹಿಟ್ಟಾಗಿತ್ತು..
ಹಸಿವಿನ ನೋವಲ್ಲಿ ಕಂಗಳು ನೆತ್ತರನ್ನೂ
ಕಪಾಳದ ಹಾದಿಯಾಗಿ ಸುರಿಸಿತ್ತು..

ಕೊಬ್ಬಿದವನು ತನ್ನ ದೇಹವನ್ನು
ಅರಮನೆಯೊಳಗಿಟ್ಟು ಪೂಜಿಸುತ್ತಿದ್ದ..
ಚಿನ್ನ, ಬೆಳ್ಳಿಯೇ ನಿತ್ಯ ಬಳಕೆಯಾಗಿತ್ತು..
ನಿದ್ರಾ ಕೊಠಡಿಯೊಳಗೆ ಮಲ್ಲಿಗೆಯ
ಘಮಘಮ ಸುವಾಸನೆಯೂ ಇತ್ತು..
ನಿದ್ದೆ ಮಾತ್ರ ಸ್ವಲ್ಪ ದೂರ ಹೋಗಿತ್ತು..

ಇವನಿಲ್ಲಿ ಸಂಜೆ ಮುಂಜಾವಿನಲ್ಲಿ
ಕೈ ಚಾಚಿ ನಡೆದು ಸುಸ್ತುಗೊಂಡು,
ಬಿಕ್ಕಾಸಿಗೆ ಸಿಕ್ಕಿದ್ದನ್ನುಂಡು,
ಗಾಳಿ-ಮಳೆಯೂ ಆಕ್ರಮಿಸುವಂತಹ
ಗುಡಿಸಲ ಬಾಗಿಲಿಗೆ ಕಾಲಿಟ್ಟು
ದುಃಖಗಳೆಲ್ಲವನ್ನೂ ಅದುಮಿಟ್ಟು..
ನಿದ್ರಾಹೀನನಾಗಿ ಮಲಗಿದ್ದ..

ಜಗದ ಮೊಗದಲ್ಲಿ ವಿವಿಧ ನೋಟವಿದೆ..
ನಿಯಮದಲ್ಲಿ ಒಂದಲ್ಲ ಸ್ವಾರ್ಥವಿದೆ..
ಉಳ್ಳವನು, ಇಲ್ಲದವನೆಂಬ ಬೇಧದೊಳಗೇ
ಈ ಪ್ರಪಂಚ ಅಡಗಿಕೊಂಡಿದೆ..

★ suwichaar.blogspot.in ★

==> ಹಕೀಂ ಪದಡ್ಕ <==

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!