ಒಳಿತು ಮತ್ತು ಕೆಡುಕು..
ಗಿಡವೊಂದು
ಮರವಾಗಲು
ಹಳಸಿ ನಾರುವ
ಗೊಬ್ಬರ ಬೇಕು..
ಒಳ್ಳೆಯದೊಂದು
ಗುರಿ ತಲುಪಲು
ವಿರೋಧಿಗಳೂ
ಜೊತೆಯಲ್ಲಿರಬೇಕು.
ಕೆಟ್ಟವನೊಬ್ಬ
ಒಳ್ಳೆಯವನಾಗಲು
ಕೆಲವೊಮ್ಮೆ ಕೆಟ್ಟತನವೇ
ಕಾರಣವಾಗಬಹುದು..
ಒಳಿತಿರುವಲ್ಲಿ
ಕೆಡುಕಿದ್ದರೇನೆ
ಒಳಿತಿಗೊಂದೊಳ್ಳೆಯ
ಮೌಲ್ಯವಿರುವುದು..
#ಹಕೀಂ.ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou