ಸ್ವಾರ್ಥಿ ಭೂಮಿ
ಓ ಪೃಥ್ವೀ..
ನೀನೆಷ್ಟು ಸ್ವಾರ್ಥಿ ...
ಮೋಡ ಸುರಿದ ನೀರನ್ನು
ನೀ ಮೈಯಲ್ಲಿ ತುಂಬಿದೆ..
ನದಿ ಉಗುಳಿದ ನೀರನ್ನು
ನೀ ಸಮುದ್ರ ಪಾಲಾಗಿಸಿದೆ..
ಬೇಸಿಗೆಯಲ್ಲಿ ಸೂರ್ಯನ
ಕಿರಣವನ್ನೂ ಮೈಗೊಡ್ಡಿದೆ..
ಎಲ್ಲವೂ ತನಗೆ ಬೇಕೆಂದು
ಸ್ವಾರ್ಥವನ್ನೇ ಬಗೆದೆ..
ಭೂಮಿ... ನೀನೆಷ್ಟು ಸ್ವಾರ್ಥಿ..
ತುಂಡು ಭೂಮಿಗಾಗಿ
ಜನಗಳು ಕಿತ್ತಾಡುವಾಗ..
ಭೂಮಿ ಸುತ್ತಲೂ ಬೇಲಿಯ
ಕಟ್ಟಲಾಗದೆಂದು ಬೀಗಿದೆ..
ಸಸ್ಯಗಳಿಗೂ ನೀನೇ ಆಧಾರ
ಎಂದು ಹಮ್ಮುತ್ತಾ ಹೇಳಿದೆ ನೀ ..
ತಲೆಯೆತ್ತಿರುವ ಸಸಿಗಳ ತಣ್ಣನೆಯ
ನೆರಳೂ ನಿನಗೇ ಎಂದೆ ನೀ..
ಭೂಮಿ.. ನೀನೆಷ್ಟು ಸ್ವಾರ್ಥಿ..
ಸಿಟ್ಟುಗೊಂಡೆಯಾದರೆ
ಬಾಯ್ತೆರೆಯುವೆ ನೀನು..
ಕೋಪಗೊಂಡೆಯಾದರೆ
ಕಂಪಿಸುವೆ ನೀನು..
ಅಹಂಕಾರದ ಗತ್ತಿನಲಿ ನೀ ಕೆಲವೊಮ್ಮೆ ಬೆಂಕಿಯನ್ನೇ ಉಗುಳುವೆ..
ನಿನ್ನಾಶ್ರಿತರನ್ನೇ ನೀ
ದಿಕ್ಕುಪಾಲಾಗಿಸಿದೆ..
ಭೂಮಿ.. ನೀನೆಷ್ಟು ಸ್ವಾರ್ಥಿ..
#ಹಕೀಂ.ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou