ಪ್ರೇಮ ಸಿಂಚನ
ಮತ್ತೆ ಮತ್ತೆ ಕಾಡುತಿದೆ ನಿನ್ನ ನೆನಪು
ಹೃದಯ ಬಯಸುತಿದೆ ನಿನ್ನ ಹೊಳಪು
ಈಗಲೂ ಘಮಿಸುತಿದೆ ನಿನ್ನ ಕಂಪು
ಸನಿಹಕೆ ಬರುವಾಗಲೇ ಮೈಯೆಲ್ಲಾ ತಂಪು
ಕಡಲ ತೀರದ ನಮ್ಮಿಬ್ಬರ ಹೆಜ್ಜೆ ಗುರುತು
ಮರೆಯಾಗಿದೆ ಪ್ರೀತಿಯಲೆಯೊಡನೆ ಬೆರೆತು
ನದಿ ದಂಡೆಯಲಿ ಕುಳಿತು ಆಡಿದ ಮಾತು
ನೆನೆಯುವೆನು ವೇದನೆಯೊಂದಿಗೆ ಕುಳಿತು
ಪ್ರೀತಿ ವಿನ್ಯಾಸಕ್ಕೆ ಮನಸೋತ ಹೂಗಳ ಹಾಡು
ಪ್ರೇಮ ವಿನಿಮಯ ನಡೆಸಿದ ಆ ಸುಂದರ ಬೀಡು
ಮತ್ತೊಮ್ಮೆ ನನ್ನೆದೆಯಾಳದ ಹೃದಯಕ್ಕೆ ನೋಡು
ಸ್ನೇಹದ ಕೊಡುಗೆಯೊಂದನ್ನು ನೀ ನನಗೆ ನೀಡು
ಮನದಲ್ಲಿ ಮುದ್ರೆಯೊತ್ತಿದೆ ನಿನ್ನ ಸೌಂದರ್ಯದ ಅಚ್ಚು
ನಿನ್ನೆದೆಯೊಳಗಿನ ಹೃದಯದ ತೆರೆಯನ್ನು ಬಿಚ್ಚು
ಮಗದೊಮ್ಮೆ ನನ್ನ ಮುಂದೆ ಪ್ರೀತಿಯ ಹಣತೆಯ ಹಚ್ಚು
ಹದಿಹರೆಯದ ನನಗೀಗಲೇ ಪ್ರೀತಿ-ಪ್ರೇಮದ ಅರೆಹುಚ್ಚು
ಬದುಕು ಶೂನ್ಯವಾಗಿದೆ ನಿನ್ನ ವಿದಾಯದೊಂದಿಗೆ
ನಿನ್ನ ದಾರಿ ಕಾಯುವೆನು ಮುಗ್ಧ ಮನದೊಂದಿಗೆ
ನಿನ್ನ ಸ್ವಾಗತಿಸುವೆ ವಾಧ್ಯ ವಿನಾದಗಳೊಂದಿಗೆ
ಕಾಯುವೆನು ನೀ ಮತ್ತೆ ಬರುವಳೆಂಬ ನಿರೀಕ್ಷೆಯೊಂದಿಗೆ..
#ಹಕೀಂ.ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou