ಪ್ರಧಾನಿಗೆ ಗೌರವ ಕೊಡಿ..
ಭಾ ರತದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಅಸ್ವಸ್ಥತಗೊಂಡ ಜನಜೀವನದ ಮಧ್ಯೆ ತಳ್ಳುಗಾಡಿಯಂತೆ ಮೆಲ್ಲಮೆಲ್ಲಗೆ ಮುಂದಕ್ಕೋ ಹಿಂದಕ್ಕೋ ಎಂದು ತಿಳಿಯದ ರೀತಿಯಲ್ಲಿ ಸಾಗುವ ಬದುಕಿನ ಬಂಡಿಯಲ್ಲಿ ಇವತ್ತು ಎಲ್ಲರೂ ನಿಸ್ಸಹಾಯಕರಾಗಿದ್ದಾರೆ. ಜನವಿರೋಧಿ ನೀತಿಗಳ ಮೂಲಕ ಮೊದಲೇ ಶವದಂತಾಗಿರುವ ಜನರನ್ನು ಮತ್ತೆಮತ್ತೆ ಚುಚ್ಚುವ ಸರಕಾರದ ಕ್ರೂರ ನಡೆಯು ದೇಶದವನ್ನು ಇನ್ನಷ್ಟೂ ಪಾತಾಳಕ್ಕೆ ತಳ್ಳಿದೆ ಮಾತ್ರವಲ್ಲ, ಅದೆಷ್ಟೋ ಸಾವು ನೋವುಗಳಿಗೆ ದೇಶದ ಪವಿತ್ರ ಮಣ್ಣು ಸಾಕ್ಷಿಯಾಗಿದೆ. ಸೆಪ್ಟೆಂಬರ್ 17 ರಂದು ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನದಂದು ಸಾಮಾಜಿಕ ತಾಣಗಳಲ್ಲಿ ದೇಶದ ಯುವಕರು 'ರಾಷ್ಟ್ರೀಯ ನಿರುದ್ಯೋಗ ದಿನ' ಎಂದು ಆಚರಿಸಿಕೊಂಡಿದ್ದರು. #NationalUnemploymentDay ಎಂಬ ಹ್ಯಾಶ್ ಟ್ಯಾಗ್ ಸಾಮಾಜಿಕ ಮಾಧ್ಯಮಗಳಾದ್ಯಂತ ಸಂಚಲನವನ್ನೇ ಸೃಷ್ಟಿಸಿ, ಸರಕಾರದ ವೈಫಲ್ಯತೆಯನ್ನು, ಪ್ರಧಾನಿಯ ಸರ್ವಾಧಿಕಾರಿ ಮುಖವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬಯಲಾಯಿತು. ಆ ಸಂಧರ್ಭದಲ್ಲಿ ಒಂದು ಗುಂಪು 'ಪ್ರಧಾನಿಯನ್ನು ಗೌರವಿಸಿ' ಎಂದು ಅಂಗಲಾಚುವ ಪರಿಸ್ಥಿತಿಯಂತೂ ತಮಾಷೆಯಾಗಿತ್ತು. ವಾಸ್ತವದಲ್ಲಿ ಈ ಹಿಂದೆ ಪ್ರಧಾನಿಯಾಗಿದ್ದಂತಹ ಡಾ. ಮನಮೋಹನ್ ಸಿಂಗ್ ಸೇರಿದಂತೆ ಬಿಜೆಪಿಯೇತರ ಹೆಚ್ಚಿನ ಪ್ರಧಾನಿಗಳನ್ನು ಹಾಗೂ ಇತರೆ ರಾಜಕೀಯ ನಾಯಕರನ್ನು, ಧಾರ್ಮಿಕ ಮುಖಂಡರನ್ನೆಲ್ಲಾ ಹೀನವಾಗಿ ಚಿತ್ರ...