ಕನ್ನಡವೆಂದರೆ..,
ಕನ್ನಡವೆಂದರೆ,
ಫಲವತ್ತಾಗಿರುವ ಕಪ್ಪು ಮಣ್ಣು..
ವಿಟಮಿನುಗಳಿರುವ ಹಣ್ಣು..
ದೇಶಕ್ಕೆ ಐಶ್ವರ್ಯ ಉಣಿಸುವ,
ಇವಳು ಸುಂದರಿ, ಭಾಗ್ಯವತಿ ಹೆಣ್ಣು..
ಕನ್ನಡದಲ್ಲಿದೆ,
ಸೌಹಾರ್ದ, ಸಹಬಾಳ್ವೆ, ಸಾಮರಸ್ಯ..
ಕನ್ನಡವ ಮಾಡೆನು ಅಪಹಾಸ್ಯ..
ಕನ್ನಡವ ಉಳಿಸಲು, ಬೆಳೆಸಲು,
ಮರೆಯಾಗಬೇಕು ನಮ್ಮಿಂದ ಆಲಸ್ಯ..
ಕನ್ನಡ ನಾಡಿದು,
ಕನ್ನಡವೇ ಕರುನಾಡ ಸಂಪತ್ತು..
ಕನ್ನಡವಿದ್ದರಿಲ್ಲ ಅಲ್ಲಿ ಆಪತ್ತು..
ಕನ್ನಡದ ವಿಶೇಷತೆ ನೂರಿಪ್ಪತ್ತು..
ಕನ್ನಡ ಮಾತನಾಡುವುದೇ ಗಮ್ಮತ್ತು..
ಕರುನಾಡ ಜನರೇ..,
ಕಟ್ಟಿ ಬೆಳೆಸುವ ನಾವು ಕನ್ನಡವ..
ಎತ್ತಿ ತೋರಿಸುವ ನಾವು ಕನ್ನಡವ..
ಕರ್ನಾಟಕದ ಮಣ್ಣಿನ ಪರಿಮಳ,
ಬನ್ನಿ, ಜಗತ್ತಿನೆಲ್ಲೆಡೆಗೂ ಪಸರಿಸುವ..
★ http://suwichaar.blogspot.in ★
#ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou