ಹೇಗೆ ಕೊಲ್ಲುವುದಕ್ಕಾಗುತ್ತದೆ..?
ಅಟ್ಟಹಾಸ ಚೀರಾಟವೆಲ್ಲಾ ಕೆಲವೇ ದಿವಸವಿರಬಹುದು ಇನ್ನೊಂದು ಬ್ರೇಕಿಂಗ್ ನ್ಯೂಸ್ ಸಿಗುವ ತನಕ ಚಾನಲ್‌ನವನ ಪ್ರಧಾನ ವಾರ್ತೆಯಾಗಿರುವುದು ತನಿಖೆ ಪೂರ್ತಿಯಾಗುವ ತನಕ ಪೋಲೀಸರೂ ಓಡಾಡುತ್ತಿರಬಹುದು ದುಃಖ- ನಷ್ಟಗಳೆಲ್ಲಾ ಹೊತ್ತು ಹೆತ್ತ ತಾಯಿಗೆ ಮತ್ತು ಲಾಲಿಸಿ ಬೆಳೆಸಿದ ತಂದೆಗೆ ಮಾತ್ರ ಮತ್ತೆ ನೆನಪುಗಳು ಕೆಲವೊಮ್ಮೆ ಬಸ್ ನಿಲ್ದಾಣದಲ್ಲೋ ಹುತಾತ್ಮ ಸಭಾಂಗಣದಲ್ಲೋ ಸೀಮಿತವಾಗಿರಬಹುದು ಆಗಲೂ, ಬದಕಿನ ಆಸೆ ಮುಗಿಯದ ಮಡದಿ ನಾಲ್ಕು ಗೋಡೆಯೊಳಗೆ ಬಿಕ್ಕಳಿಸಿ ಅಳುತ್ತಿರಬಹುದು ರೆಕ್ಕೆಬಳಿಯದ ಮುಗ್ಧ ಮುಖ ಒಮ್ಮೆಯೂ ಮರಳದ ತಂದೆಗಾಗಿ ದಾರಿ ಕಾಯುತ್ತಿರಬಹುದು ಕೊಲೆಗಾರರು ಆ ಹೊತ್ತಲ್ಲಿ ಮುಂದಿನ ಬೇಟೆ ಹುಡುಕಿ ಅಲೆಯುತ್ತಿರಬಹುದು. *** ಮೂಲ ಮಲಯಾಳಂ; ಎಬಿ ಕುಟ್ಟಿಯಾನಂ ಕನ್ನಡ; ಹಕೀಂ ಪದಡ್ಕ