ಪೋಸ್ಟ್‌ಗಳು

ಅಕ್ಟೋಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ರಧಾನಿಗೆ ಗೌರವ ಕೊಡಿ..

ಇಮೇಜ್
ಭಾ ರತದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಅಸ್ವಸ್ಥತಗೊಂಡ ಜನಜೀವನದ ಮಧ್ಯೆ ತಳ್ಳುಗಾಡಿಯಂತೆ ಮೆಲ್ಲಮೆಲ್ಲಗೆ ಮುಂದಕ್ಕೋ ಹಿಂದಕ್ಕೋ ಎಂದು ತಿಳಿಯದ ರೀತಿಯಲ್ಲಿ ಸಾಗುವ ಬದುಕಿನ ಬಂಡಿಯಲ್ಲಿ ಇವತ್ತು ಎಲ್ಲರೂ ನಿಸ್ಸಹಾಯಕರಾಗಿದ್ದಾರೆ. ಜನವಿರೋಧಿ ನೀತಿಗಳ ಮೂಲಕ ಮೊದಲೇ ಶವದಂತಾಗಿರುವ ಜನರನ್ನು ಮತ್ತೆಮತ್ತೆ ಚುಚ್ಚುವ ಸರಕಾರದ ಕ್ರೂರ ನಡೆಯು ದೇಶದವನ್ನು ಇನ್ನಷ್ಟೂ ಪಾತಾಳಕ್ಕೆ ತಳ್ಳಿದೆ ಮಾತ್ರವಲ್ಲ, ಅದೆಷ್ಟೋ ಸಾವು ನೋವುಗಳಿಗೆ ದೇಶದ ಪವಿತ್ರ ಮಣ್ಣು ಸಾಕ್ಷಿಯಾಗಿದೆ.  ಸೆಪ್ಟೆಂಬರ್ 17 ರಂದು ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನದಂದು ಸಾಮಾಜಿಕ ತಾಣಗಳಲ್ಲಿ ದೇಶದ ಯುವಕರು 'ರಾಷ್ಟ್ರೀಯ ನಿರುದ್ಯೋಗ ದಿನ' ಎಂದು ಆಚರಿಸಿಕೊಂಡಿದ್ದರು. #NationalUnemploymentDay ಎಂಬ ಹ್ಯಾಶ್ ಟ್ಯಾಗ್ ಸಾಮಾಜಿಕ ಮಾಧ್ಯಮಗಳಾದ್ಯಂತ ಸಂಚಲನವನ್ನೇ ಸೃಷ್ಟಿಸಿ, ಸರಕಾರದ ವೈಫಲ್ಯತೆಯನ್ನು, ಪ್ರಧಾನಿಯ ಸರ್ವಾಧಿಕಾರಿ ಮುಖವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬಯಲಾಯಿತು. ಆ ಸಂಧರ್ಭದಲ್ಲಿ ಒಂದು ಗುಂಪು 'ಪ್ರಧಾನಿಯನ್ನು ಗೌರವಿಸಿ' ಎಂದು ಅಂಗಲಾಚುವ ಪರಿಸ್ಥಿತಿಯಂತೂ ತಮಾಷೆಯಾಗಿತ್ತು. ವಾಸ್ತವದಲ್ಲಿ ಈ ಹಿಂದೆ ಪ್ರಧಾನಿಯಾಗಿದ್ದಂತಹ ಡಾ‌. ಮನಮೋಹನ್ ಸಿಂಗ್ ಸೇರಿದಂತೆ ಬಿಜೆಪಿಯೇತರ ಹೆಚ್ಚಿನ ಪ್ರಧಾನಿಗಳನ್ನು ಹಾಗೂ ಇತರೆ ರಾಜಕೀಯ ನಾಯಕರನ್ನು, ಧಾರ್ಮಿಕ ಮುಖಂಡರನ್ನೆಲ್ಲಾ ಹೀನವಾಗಿ ಚಿತ್ರ...

ಪಟ್ಟಣದೆಡೆಗಿನ ದಾರಿ ಮಧ್ಯೆ..!

ಇಮೇಜ್
ಸ ಣ್ಣದೊಂದು ಗ್ರಾಮದಲ್ಲಿ ಹುಟ್ಟಿಬೆಳೆದವರಿಗೆ ಪಟ್ಟಣದ ಮೇಲಿನ ಕನಸು ಸಹಜವಾಗಿಯೇ ಇರುತ್ತದೆ. ಗಗನಚುಂಬಿ ಕಟ್ಟಡಗಳು, ರಸ್ತೆಪೂರಾ ವಾಹನಗಳ ಸಾಲು, ವಿಧವಿಧದ ಮಳಿಗೆಗಳು, ಟಾರು ಹೊದಿಸಿದ ವಿಶಾಲ ರಸ್ತೆ, ಸುತ್ತಲುಇ ಜನಜಂಗುಳಿ.. ಹೀಗೆ ಹಳ್ಳಿ ಹುಡುಗ ಸಸಿ ಮರಗಳು ಮತ್ತು ಪ್ರಾಣಿ ಪಕ್ಷಿಗಳೊಂದಿಗಿನ ಬದುಕಿನಿಂದ ಪಟ್ಟಣದ ಕಡೆಗಿರುವ ದಾರಿ ನೋಡುತ್ತಾ ಮನದೊಳಗೇ ಕಾಲ್ಪನಿಕ ನಗರವನ್ನು ಕಟ್ಟಿರುತ್ತಾನೆ. ಸಂಜೆಯಾಗುತ್ತಲೇ  ಸುತ್ತಲೂ ಕತ್ತಲು ತುಂಬಿದ ಹಳ್ಳಿಯ ಕವಲುದಾರಿಗಿಂತ ಬಣ್ಣ ಬಣ್ಣದ ಲೈಟುಗಳಿಂದ ಮಿನುಗಿ ಕಂಗೊಳಿಸುವ ಹೆದ್ದಾರಿಯನ್ನೇ ಮೆಚ್ಚಿಕೊಳ್ಳುತ್ತೇವೆ. ಹೀಗೇ ಹಳ್ಳಿ ಮತ್ತು ಪಟ್ಟಣದ ನಡುವಿನ ದೂರವೇ ಬದುಕು. ಆಸೆಯಿಲ್ಲದೆ ಬದುಕಿ ಸಿದ್ಧಾರ್ಥ ಬುದ್ಧನಾದಂತೆ ಇಲ್ಲಿ ಎಲ್ಲರೂ ಆಸೆಯನ್ನು ತ್ಯಜಿಸಿಲ್ಲ. ಬುದ್ಧನ ಹಾದಿಗೆ ಕೆಲವೇ ಕೆಲವು ಮಂದಿ ಸಾಗಿದರಲ್ಲದೇ ಉಳಿದವರೆಲ್ಲರೂ ಆಸೆಯ ಮಡುವಿನಲ್ಲಿ ತೇಲಾಡುತ್ತಿದ್ದಾರೆ. ಸಾವಿನ ಕ್ಷಣ ಮೊದಲೂ ಬದುಕನ್ನೇ ಬಯಸುವ ನಮ್ಮ ಆಸೆಯ ಅಗಾಧ ಪ್ರಮಾಣ ಬದುಕಿನುದ್ದಕ್ಕೂ ಮುಂದುವರಿದಿರುತ್ತದೆ. ಹಳ್ಳಿಯವನು ಪಟ್ಟಣದ ಕನಸು ಕಾಣುವಂತೆ, ಪಟ್ಟಣದಲ್ಲೇ ಹುಟ್ಟಿಬೆಳೆದವ ಹಳ್ಳಿಯ ಮೇಲೆ ಪುಳಕಿತನಾಗುವುದೂ ಉಂಟು. ಅಂದರೆ ಮನುಷ್ಯ ತನ್ನಲ್ಲಿಲ್ಲದ್ದನ್ನೇ ಪಡೆಯುವ ಆಕಾಂಕ್ಷೆಯಲ್ಲಿರುತ್ತಾನೆಂದರ್ಥ.  ಹಳ್ಳಿಹುಡುಗನೊಬ್ಬ ಬಾಲ್ಯದಲ್ಲಿ ಮನಸ್ಸಿನೊಳಗೇ ಕಟ್ಟಿಕೊಂಡ ನಗರದರಮನೆಯನ್ನು ಮುಂದಕ್ಕೆ ಕಣ್ತುಂಬ...

ಕನ್ನಡವೇ ಸತ್ಯ; ಕನ್ನಡವೇ ನಿತ್ಯ..

ಇಮೇಜ್
ಕ ರ್ನಾಟಕ ರಾಜ್ಯದಲ್ಲಿ ಈಗ ಅತಿ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ವಿಚಾರವೆಂದರೆ, 'ಹಿಂದಿ ದಿವಸ್ ಮತ್ತು ಹಿಂದಿ ಹೇರಿಕೆ' ಯ ಕುರಿತಾಗಿ. ಸರಕಾರವು ಸೆಪ್ಟೆಂಬರ್ 14 ನ್ನು ಹಿಂದಿ ದಿವಸ್ ಆಗಿ ಆಚರಿಸುವಂತೆ ಪ್ರಖ್ಯಾಪಿಸಿದಂದಿನಿಂದ ಈ ಚರ್ಚೆಗಳು ದೊಡ್ಡ ಮಟ್ಟದಲ್ಲಿ ಬೆಳೆದಿದೆ‌. ಕರ್ನಾಟಕದಲ್ಲಿದ್ದುಕೊಂಡ ಕನ್ನಡವನ್ನೇ ಉಸಿರಾಡುವ ಕನ್ನಡಿಗರು ಹಿಂದಿ ದಿನ ಎಂಬುದನ್ನು ಆಚರಿಸಬೇಕಿಲ್ಲ ಮತ್ತು ಆಚರಿಸುವುದೂ ಇಲ್ಲ ಎನ್ನುವುದೇ ಬಹುಪಾಲು ಕನ್ನಡಿಗರ ವಾದ. ಆದಾಗ್ಯೂ ಈ ವಾದ ಸಮಕಾಲೀನವೇ. ಕನ್ನಡಿಗರ ಮೇಲೆ ರಾಷ್ಟ್ರ ಭಾಷೆ ಎನ್ನುವ ನೆಪವೊಡ್ಡಿ ಹಿಂದಿಯನ್ನಿ ಬಲವಂತವಾಗಿ ಹೇರುವುದಕ್ಕಿರುವ ತಂತ್ರಗಳ ಮುಂದುವರಿದ ಭಾಗವಾಗಿದೆ ಇದು. ಇದನ್ನು ಕನ್ನಡಿಗರೆಲ್ಲರೂ ಒಕ್ಕೊರಲಿನಿಂದ ವಿರೋಧಿಸುತ್ತಿದ್ದಾರೆನ್ನುವುದು ಅಭುನಂದನಾರ್ಹ. ಕುವೆಂಪುರವರು ಒಂದು ಮಾತನ್ನು ಹೇಳುತ್ತಾರೆ; “ಇಂಗ್ಲೆಂಡಿನಲ್ಲಿ ಇಂಗ್ಲಿಷ್ ಇರುವಂತೆ, ಫ್ರಾನ್ಸಿನಲ್ಲಿ ಫ್ರೆಂಚ್ ಇರುವಂತೆ, ಕರ್ನಾಟಕದಲ್ಲಿ ಕನ್ನಡವಿರಬೇಕು. ಈ ವಿಷಯದಲ್ಲಿ ಅಸ್ವಾಭಾವಿಕತೆ ಲವಲೇಶವೂ ಇಲ್ಲ. ” ಸಾಮಾನ್ಯವಾಗಿ ಕನ್ನಡ ಭಾಷೆಯಂತೆಯೇ ಹಿಂದಿಯೂ ಒಂದು ಭಾಷೆ. ಅದಕ್ಕೆ ಮಿಗಿಲಾದ ಪ್ರತ್ಯೇಕತೆಗಳೇನೂ ಇಲ್ಲ. ಉತ್ತರ ಭಾರತದಲ್ಲಿ ಹೆಚ್ಚಾಗಿ ಹಿಂದಿ ಬಳಕೆಯಾಗುತ್ತಿದೆ ಎಂದ ಮಾತ್ರಕ್ಕೆ ಹಿಂದಿಯನ್ನು ಎಲ್ಲರೂ ಪರಿಗಣಿಸಬೇಕೆನ್ನುವುದು ತಪ್ಪು. ಕನ್ನಡಿಗರಿಗೆ ಅಥವಾ ಕರ್ನಾಟಕಕ್ಕೆ ಕನ್ನಡವೇ ...

ಗಾಂಧಿಯ ರಾಮರಾಜ್ಯ ಮತ್ತು ಪ್ರಸ್ತುತ ಭಾರತ..!?

ಇಮೇಜ್
(ಈ ಲೇಖನ 'ಉದಯಕಾಲ' ದೈನಿಕದ 02 ನೇ ಅಕ್ಟೋಬರ್ ಸಂಚಿಕೆಯಲ್ಲಿ ಪ್ರಕಟಗೊಂಡಿದೆ.) ಸತ್ಯ, ಅಹಿಂಸೆ ಮತ್ತು ಸಮಾನತೆಯ ಪ್ರತಿಪಾದನೆಯೊಂದಿಗೆ ಭಾರತವನ್ನು ಬ್ರಿಟಿಷರ ಕರಾಳ ಕೈಗಳಿಂದ ಬಿಡಿಸಿಕೊಂಡು, ದೇಶದ ಪ್ರಜೆಗಳಿಗೆ ಸ್ವಾತಂತ್ರ್ಯದ ಸವಿರುಚಿ ಉಣಿಸುವಲ್ಲಿ ಮಹಾತ್ಮಾ ಗಾಂಧಿಯ ಪರಿಶ್ರಮ ಅವಿಸ್ಮರಣೀಯ. ಇಂದಿಗೂ ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯನ ಮನಸ್ಸಿನಾಳದಲ್ಲಿ ಮರೆಯದೇ ಅಚ್ಚಾಗಿ ಮೂಡಿರುವ, ಪ್ರತಿಕ್ಷಣವೂ ಕಾಡುವುದು ಬಾಪೂಜಿಯ ಅಹಿಂಸಾ ಮಾರ್ಗ, ಸತ್ಯ ಮತ್ತು ಸಮಾನತೆಯ ಬದುಕು, ಸರಳ ಜೀವನ, ಇವೆಲ್ಲದರ ಹೊರತಾಗಿ ಗಾಂಧಿ ಕಂಡ ಸುಂದರ, ಸ್ವಸ್ಥ ಭಾರತದ ಪರಿಕಲ್ಪನೆ. ಗಾಂಧಿ ಕನಸಿನ ಭಾರತದಲ್ಲಿ ಪ್ರಜೆ ಮತ್ತು ಪ್ರಭುವಿಗೆ ಸಮಾನ ಸ್ಥಾನವಿತ್ತು. ಅಸ್ಪೃಶ್ಯತೆ ಸಂಪೂರ್ಣವಾಗಿ ತೊಲಗಿತ್ತು. ತನ್ನ ಧರ್ಮದ ನಿಲುವಿನಲ್ಲಿ ಬದುಕುವುದರೊಡನೆ ಇತರ ಜಾತಿ-ಧರ್ಮಗಳನ್ನು ಗೌರವಿಸುವ, ಪ್ರೀತಿಸುವ ಮನಸ್ಥಿತಿ ಬೆಳೆದುಕೊಂಡಿತ್ತು. 'ಹಳ್ಳಿಗಳೇ ದೇಶದ ಆಧಾರ ಸ್ತಂಭ' ಎನ್ನುವ ಪರಿಕಲ್ಪನೆಯಡಿ ಭಾರತದಲ್ಲಿ ಹಳ್ಳಿಗಳನ್ನು ಅಭಿವೃದ್ಧಿಪಡಿಸಿ, ಕೃಷಿ ಮತ್ತು ಕೈಗಾರಿಕೆಗಳಿಗೆ ಪ್ರಾಶಸ್ತ್ಯ ಕೊಡುವುದರೊಂದಿಗೆ ದೇಶದ ಬೆಳವಣಿಗೆಗೆ ದಾರಿಯಿತ್ತು. ಸಾಕ್ಷರ ಭಾರತದ ದೂರದೃಷ್ಟಿಯಿತ್ತು. ದೇಶವೆಂಬ ನಮ್ಮ ಅರಮನೆಯನ್ನು ಸದಾ ಸ್ವಚ್ಛವಾಗಿಡುವ ನಿಯ್ಯತ್ತಿತ್ತು. ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಾಣುವುದಕ್ಕಾಗಿ 'ಗ್ರಾಮ ರಾಜ್ಯ' ದ ಆರ್ಥಿಕ...

ರೈತರು ಬೀದಿಯಲ್ಲಿದ್ದಾರೆ..

ಇಮೇಜ್
ನೋ ಟ್ ಬ್ಯಾನ್ ದೇಶದ ಬಡವರನ್ನು ಬೀದಿಪಾಲು ಮಾಡಿತು. ನಿರುದ್ಯೋಗ ಸಮಸ್ಯೆಯಿಂದಾಗಿ ಯುವಕರು ಬೀದಿಗಿಳಿದರು. ಎನ್ನಾರ್ಸಿ, ಸಿಎಎ ಹೆಸರಿನಲ್ಲಿ ದೇಶದ ಅಲ್ಪಸಂಖ್ಯಾತರನ್ನು ಬೀದಿಗಿಳಿಸಲಾಯ್ತು. ಬಿಎಸ್‌ಎನ್‌ಎಲ್ ಸಿಬ್ಬಂದಿಗಳೂ ಬೀದಿಗೆ ಬಂದಿದ್ದಾರೆ. ಕೊರೋನಾ ಎಂಬ ಮಹಾಮಾರಿ ಜನತೆಯನ್ನು ಮನೆಯೊಳಗೆ ಕೂರುವಂತೆ ಮಾಡಿದರ ಮಧ್ಯೆಯೇ, ಸರಕಾರ ಮತ್ತೊಮ್ಮೆ ಜನರನ್ನು ಬೀದಿಗಿಳಿಸುತ್ತಿದೆ. ಕೃಷಿ ಮಸೂದೆ ಎಂಬ ಕರಾಳ ನೀತಿಯಿಂದಾಗಿ ಮೊದಲೇ ಸಮಸ್ಯೆಗಳ ಸುಳಿಯಲ್ಲಿ ತಡಕಾಡುವ ರೈತರನ್ನು ಇನ್ನಷ್ಟು ತೊಂದರೆಗೀಡಾಗಿಸುವ ಪ್ರಯತ್ನ ನಡೆಯುತ್ತಿದ್ದು, ಇದನ್ನು ವಿರೋಧಿಸಿ ದೇಶದಾದ್ಯಂತ ರೈತರು ಬೀದಿಯಲ್ಲಿದ್ದಾರೆ. ದುರಹಂಕಾರದ ಆಡಳಿತದಲ್ಲಿ ದೇಶವನ್ನು ಸರ್ವನಾಶ ಮಾಡುತ್ತಾ, ದೇಶದ ಪ್ರಜೆಗಳನ್ನು ಸದಾ ಪೀಡಿಸುತ್ತಾ, ಶ್ರೀಮಂತ ಕಾರ್ಪೊರೇಟರ್ ಗಳು, ಸೆಲೆಬ್ರೆಟಿಗಳನ್ನು ಮಾತ್ರ ತನ್ನ ಮಡಿಲಲ್ಲಿ ಜೋಪಾನ ಕಾಪಾಡಿಕೊಂಡು ಬಿಜೆಪಿ ಸರಕಾರ ಇಷ್ಟರ ತನಕ ಮುಂದುವರಿದಿದೆ. ಪ್ರಜೆಗಳೆಲ್ಲಾ ದಿನನಿತ್ಯ ಒಂದಲ್ಲ ಒಂದು ವಿಚಾರದಲ್ಲಿ ಸರಕಾರ ವಿರುದ್ಧ ಧ್ವನಿಯೆತ್ತುತ್ತಾ, ಹೋರಾಟ ನಡೆಸುತ್ತಲೇ ಇದ್ದಾರೆ. ಇದ್ಯಾವುದಕ್ಕೂ ತಲೆಕೆಡಿಸದ ಸರಕಾರ ಮಾತ್ರ ದರಿದ್ರ ಆಡಳಿತದೊಂದಿಗೆ ದೇಶದವನ್ನು ಸಂಕಷ್ಟದ ಮೇಲೆ ಸಂಕಷ್ಟಕ್ಕೆ ದೂಡುತ್ತಿದೆ. ಮೇಲ್ನೋಟಕ್ಕೆ ಕೃಷಿ ಮಸೂದೆಯಲ್ಲಿ ರೈತರಿಗೆ ತೊಂದರೆಯಾಗುವಂತೆ ಕಂಡು ಬರುತ್ತಿಲ್ಲವಾದರೂ ಕೂಡ, ಈ ಮೂರು ಮಸೂದೆಗಳ ಬಗ್ಗೆ ಕೂಲಂಕುಷ...