ಭಾರತ ವಿಶ್ವಗುರುವಾಗುತ್ತಿದೆ..!!
ಪ್ರತಿಯೊಬ್ಬ ಭಾರತೀಯನಿಗೂ ನಮ್ಮ ದೇಶ ಉನ್ನತಿಗೇರಬೇಕು ಎಂಬ ಕನಸಿದೆ. ಸಂಪ್ರದಾಯ, ಸಂಸ್ಕೃತಿ, ವೈವಿಧ್ಯತೆಗಳಿಂದ ಭಾರತ ಇತರ ರಾಷ್ಟ್ರಗಳಿಗಿಂತ ಭಿನ್ನವಾಗಿದೆ. ಜಗತ್ತಿನ ಎಲ್ಲಾ ರಾಷ್ಟ್ರಗಳು ಭಾರತವನ್ನು ತಲೆಯೆತ್ತಿ ನೋಡಬೇಕು, ನಮ್ಮ ದೇಶದ ಖ್ಯಾತಿ ಜಗತ್ತಿನುದ್ದಗಲಕ್ಕೆ ವ್ಯಾಪಿಸಿ ಇದು ಸುಸಂಕೃತ, ಸಂಪದ್ಭರಿತ ಮತ್ತು ಸಾಹೋದರ್ಯದಿಂದ ಮನ್ನಣೆ ಗಳಿಸಿ ಜಗತ್ತಿನ ಗುರುವಾಗಬೇಕು ಎಂಬ ಮೋಹ ನಮಗಿದೆ. 'ವಿಶ್ವಗುರು' ಎಂಬ ಪರಿಕಲ್ಪನೆಯಡಿಯಲ್ಲಿ ವರ್ಷಗಳ ಹಿಂದೆ ಚಕ್ರವರ್ತಿ ಸೂಲಿಬೆಲೆಯವರು ಒಂದು ಭಾಷಣದಲ್ಲಿ '2017 ಕ್ಕೆ ಭಾರತ ವಿಶ್ವಗುರುವಾಗುತ್ತದೆ' ಎಂದು ಹೇಳಿದ್ದರು. ಅದನ್ನೇ ಮಾನದಂಡವಾಗಿಸಿಕೊಂಡು ಒಂದು ಬಣ ಈಗಾಗಲೇ ಭಾರತ ವಿಶ್ವಗುರುವಾಗಿದೆ ಎಂಬ ವಾದದೊಂದಿಗೆ, ನರೇಂದ್ರ ಮೋದಿಯವರು ಪ್ರಧಾನಿಯಾದ ಕಾರಣದಿಂದ ಇದು ಸಾಧ್ಯವಾಯಿತು ಎಂಬ ತರ್ಕವನಿಟ್ಟಿದ್ದಾರೆ. ಅವರ ಪ್ರಕಾರ ಇವತ್ತು ಭಾರತ ಜಗತ್ತಿನ ಗುರು, ಪ್ರತಿಯೊಂದರಲ್ಲೂ ಭಾರತ ಮೇಲುಗೈ, ಜಗತ್ತಿನ ಬಹುತೇಕ ರಾಷ್ಟ್ರಗಳು ಭಾರತವನ್ನು ಮಾದರಿಯಾಗಿಸಿಕೊಂಡಿದೆಯಂತೆ. ಇದಕ್ಕೆ ಪೂರಕವೆಂಬಂತೆ ನಕಲಿ ಸಾಧನೆಗಳ ಪಟ್ಟಿಯೊಂದಿಗೆ ಅವರು ಮುಂದೆ ಬರುತ್ತಿದ್ದಾರೆ. ವಿಶ್ವಗುರು ಆಗಬೇಕಾದರೆ ಇರಬೇಕಾದ ಕನಿಷ್ಠ ಮಾನದಂಡವೇನು ಎಂಬುದರ ಬಗ್ಗೆಯೂ ಅರಿವಿಲ್ಲದೆ ಭಾರತದ ಮೇಲಿನ ಪ್ರೀತಿ ಎಂಬ ಪರದೆಯಡಿಯಲ್ಲಿ ನರೇಂದ್ರ ಮೋದಿಯನ್ನು ಪೂಜಿಸುವ ಪರಿಯಿಂದಾಗಿ ಸರಕಾರದ ವೈಫಲ್ಯತೆಗಳು ಮತ್ತ...